ಕಾರ್ಯಕ್ರಮಗಳು

ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯಲ್ಲಿ ಪಿ.ಎಚ್ಡಿ ಮತ್ತು ಎಂ. ಫಿಲ್ ಪದವಿ ಬಿ.ಎಂ.ಶ್ರೀ. ಪ್ರತಿಷ್ಠಾನದ ಸಂಶೋಧನ ಚಟುವಟಿಕೆಗಳನ್ನು ಗುರುತಿಸಿ ಹಂಪಿ ಕನ್ನಡ ವಿಧ್ವವಿದ್ಯಾನಿಲಯವು ಸ್ನಾತಕೋತ್ತರ ಸಂಶೋಧನ ಕೇಂದ್ರವನ್ನಾಗಿ 2003 ರಿಂದ ಮಾನ್ಯ ಮಾಡಿದೆ. ಈ ಕೇಂದ್ರದ ಕನಸುಗಾರರೂ ಸಂಸ್ಥಾಪಕರೂ ಆಗಿದ್ದ ಪ್ರೊ|| ಎಂ.ವಿ. ಸೀತಾರಾಮಯ್ಯನವರ ಹೆಸರಿನ ಈ ಸ್ನಾತಕೋತ್ತರ ಅಧ್ಯಯನ - ಸಂಶೋಧನ ಕೇಂದ್ರದಿಂದ ಪಿ. ಎಚ್ಡಿ. ಮತ್ತು ಎಂ.ಫಿಲ್. ಪದವಿಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ, ನಾಡಿನ ಪ್ರಸಿದ್ಧ ವಿದ್ವಾಂಸರ ಮಾರ್ಗದರ್ಶನದಲ್ಲಿ ಅದ್ಯಯನ ತರಗತಿಗಳು ನಡೆಯುತ್ತಿವೆ. ಪ್ರತಿವರ್ಷ ಮೇ-ಜೂನ್ನಲ್ಲಿ ಅರ್ಜಿಗಳನ್ನು ಕರೆಯಲಾಗುವುದು.